ಇನ್ಸ್‌ಪೆಕ್ಟರ್ ವಿಕ್ರಮ್, ಅರ್ಜುನ್ ಗೌಡ, ಜಂಟಲ್‌ಮ್ಯಾನ್ ಮತ್ತು ಇನ್ನಿತರ ಪ್ರಾಜೆಕ್ಟ್ ಗಳಲ್ಲಿ ಕೆಲಸ ಮಾಡುತ್ತಿರುವ ಪ್ರಜ್ವಲ್ ದೇವರಾಜ್ ಅವರು ಖದರ್ ಕುಮಾರ್ ಅವರೊಂದಿಗೆ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ. ದಿಶಾ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ಸುಮಲತಾ, ಹರಿಪ್ರಿಯಾ ಅಭಿನಯದ “ಡಾಟರ್ ಆಫ್ ಪಾರ್ವತಮ್ಮ” ಚಿತ್ರ ನಿರ್ಮಾಣ ಮಾಡಿದ್ದ ನಿರ್ಮಾಪಕ ಕೆ. ಎಂ. ಶಶಿಧರ್ ತಮ್ಮ ಎರಡನೇ ಸಿನಿಮಾ ನಿರ್ಮಾಣಕ್ಕೆ ಸಜ್ಜಾಗುತ್ತಿದ್ದಾರೆ. ಈ ಬಾರಿ ಒಂದು ಪಕ್ಕಾ ಕಮರ್ಷಿಯಲ್ ಫ್ಯಾಮಿಲಿ ಸಬ್ಜೆಕ್ಟ್ ಮಾಡಲು ನಿರ್ದೇಶಕ ಖದರ್ ಕುಮಾರ್ ಮುಂದಾಗಿದ್ದಾರೆ. ಆಕ್ಷನ್, ಪ್ರೀತಿ ಮತ್ತು ಸೆಂಟಿಮೆಂಟ್ ನ ಮಿಶ್ರಣ ಈ ಚಿತ್ರದಲ್ಲಿ ಇರಲಿದೆ ಎನ್ನುತ್ತಾರೆ ನಿರ್ಮಾಪಕ ಶಶಿಧರ್.

ಸದ್ಯ ಲೊಕೇಷನ್, ಇತರ ತಾರಾ ಬಳಗ ಮತ್ತು ಸಿಬ್ಬಂದಿ ವರ್ಗದ ಹುಡುಕಾಟದಲ್ಲಿ ತೊಡಗಿರುವ ತಯಾರಕರು, ಚಿತ್ರದ ಚಿತ್ರೀಕರಣ ಅಕ್ಟೋಬರ್ ತಿಂಗಳಲ್ಲಿ ಶುರು ಮಾಡಲು ನಿರ್ಧರಿಸಿದ್ದಾರೆ.