ರಾಜ್ಯದಲ್ಲಿ ಪೈಲ್ವಾನನ ಆರ್ಭಟ ಜೋರಾಗಿದೆ. ವಿದೇಶಗಳಲ್ಲೂ ಕನ್ನಡದ ‘ಪೈಲ್ವಾನ್‍’ನ ಮೇಲೆ ಪಂದ್ಯಗಳು ನಡೀತಿವೆ. ಕಿಚ್ಚನ ಪಂಚ್‍ಗೆ ಬಾಕ್ಸಾಫಿಸ್​ ಧೂಳೀಪಟವಾಗಿದೆ.’ಪೈಲ್ವಾನ್’ ಸುಮಾರು 4000 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿದ್ದು, ಕನ್ನಡ, ಹಿಂದಿ ಸೇರಿ ಐದು ಭಾಷೆಗಳಲ್ಲಿ ತೆರೆಕಂಡಿರುವ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪರಿಣಾಮ, ಬಾಕ್ಸ್​ ಆಫೀಸ್ ಕಲೆಕ್ಷನ್​ನಲ್ಲಿ ಒಳ್ಳೆಯ ಗಳಿಕೆಯಾಗುತ್ತಿದೆ. ಗುರುವಾರ (ಸೆ.12) ತೆರೆಕಂಡ ಸಿನಿಮಾ ಸತತ ಐದನೇ ದಿನವೂ ಎಲ್ಲೆಡೆ ಹೌಸ್​ಫುಲ್ ಪ್ರದರ್ಶನ ಕಂಡಿದೆ.

ಮೊದಲ ವಾರದಲ್ಲಿ ಭರ್ಜರಿ ಓಟದ ನಂತರ, ಕಿಚಾ ಸುದೀಪ್ ಅವರ ಪೈಲ್ವಾನ್ 2 ನೇ ವಾರವನ್ನು ಪ್ರವೇಶಿಸಿದ್ದಾರೆ. ಮೊದಲ 5 ದಿನಗಳಲ್ಲಿ ಈ ಚಿತ್ರವು 75.1 ಕೋಟಿಗಳನ್ನು ಸಂಗ್ರಹಿಸಿದೆ ಎಂದು ಅಂದಾಜಿಸಲಾಗಿದೆ.ಆದ್ದರಿಂದ ಚಿತ್ರವು 100 ಕೋಟಿ ಕ್ಲಬ್‌ಗೆ ಪ್ರವೇಶಿಸಲು ಸಜ್ಜಾಗಿದೆ.

ಪೈಲ್ವಾನ್ ಡೇ ವೈಸ್ ಬಾಕ್ಸ್ ಆಫೀಸ್ ಕಲೆಕ್ಷನ್ಸ್ (ಒಟ್ಟು)

ದಿನ 1 ಅಂದಾಜು ಬಾಕ್ಸ್ ಆಫೀಸ್ ಕಲೆಕ್ಷನ್: 17 ಕೋಟಿ
ದಿನ 2 ಅಂದಾಜು ಬಾಕ್ಸ್ ಆಫೀಸ್ ಕಲೆಕ್ಷನ್: 15 ಕೋಟಿ
ದಿನ 3 ಅಂದಾಜು ಬಾಕ್ಸ್ ಆಫೀಸ್ ಕಲೆಕ್ಷನ್: 14 ಕೋಟಿ
ದಿನ 4 ಅಂದಾಜು ಬಾಕ್ಸ್ ಆಫೀಸ್ ಕಲೆಕ್ಷನ್: 18 ಕೋಟಿ
ದಿನ 5 ಅಂದಾಜು ಬಾಕ್ಸ್ ಆಫೀಸ್ ಕಲೆಕ್ಷನ್: 11.1 ಕೋಟಿ

ಒಟ್ಟು 5 ದಿನದ ಬಾಕ್ಸ್ ಆಫೀಸ್ ಕಲೆಕ್ಷನ್: 75.1 ಕೋಟಿ ‘ಪೈಲ್ವಾನ್​’ ಚಿತ್ರದಲ್ಲಿ ಸುದೀಪ್​ಗೆ ಜೊತೆಯಾಗಿ ಆಕಾಂಕ್ಷಾ ಸಿಂಗ್​ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಸುನೀಲ್​ ಶೆಟ್ಟಿ, ಕಬೀರ್​ ದುಹಾನ್​ ಸಿಂಗ್​ ಹಾಗೂ ಸುಶಾಂತ್​ ಸಿಂಗ್​ ಬಣ್ಣ ಹಚ್ಚಿದ್ದಾರೆ. ಕೃಷ್ಣ ಈ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ.