ಸ್ಯಾಂಡಲ್ ವುಡ್ ನ ನಿರ್ದೇಶಕ ಮತ್ತು ನಟ ರಿಷಭ್ ಶೆಟ್ಟಿ ಈಗ ‘ರುದ್ರಪ್ರಯಾಗ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಚಿತ್ರೀಕರಣಕ್ಕಾಗಿ ಲೊಕೇಷನ್ ಹುಡುಕಾಟದಲ್ಲಿದ್ದಾರೆ ರಿಷಬ್.

ಸಾಲು ಸಾಲು ಸಿನಿಮಾಗಳನ್ನು ಕೈಯಲ್ಲಿ ಇಟ್ಟುಕೊಂಡಿರುವ ರಿಷಬ್ ಈಗ ಮೊನ್ನೆ ಮೊನ್ನಯಷ್ಟೆ ಅನೌನ್ಸ್ ಮಾಡಿರುವ ‘ರುದ್ರಪ್ರಯಾಗ’ ಚಿತ್ರದ ಚಿತ್ರೀಕರಣಕ್ಕೆ ಸಜ್ಜಾಗುತ್ತಿದ್ದಾರೆ. ಚಿತ್ರೀಕರಣಕ್ಕೆ ಲೊಕೇಶನ್ ಹುಡುಕಾಟದಲ್ಲಿ ರಿಷಬ್ ಮತ್ತು ತಂಡ ಪಶ್ಚಿಮ ಘಟ್ಟದ ದಾಂಡೇಲಿ ಕಾಡಿನ ಕಡೆ ಪಯಣ ಬೆಳೆಸಿ, ನಂತರ ಬೆಳಗಾವಿಯ ಭೀಮ್ಗಡ್ ತಲುಪಿದೆ. ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್‌ನಲ್ಲಿ ಚಿರತೆ, ಕಾಡು, ನದಿ ಎಲ್ಲವೂ ಇದ್ದು ಸಿನಿಮಾದ ಕಂಟೆಂಟ್‌ ಬಗ್ಗೆ ಎಲ್ಲರಿಗೂ ಕುತೂಹಲ ಹುಟ್ಟಿಸಿದೆ.

‘ರುದ್ರಪ್ರಯಾಗ’ ರಿಷಬ್ ಶೆಟ್ಟಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಚಿತ್ರಕ್ಕೆ ಜಯಣ್ಣ-ಬೋಗೇಂದ್ರ ಬಂಡವಾಳ ಹೂಡುತ್ತಿದ್ದಾರೆ. ಸದ್ಯ ‘ರುದ್ರಪ್ರಯಾಗ’ ಚಿತ್ರದ ಮೂಲಕ ಸದ್ದು ಮಾಡುತ್ತಿರುವ ರಿಷಬ್ ಸಧ್ಯದಲ್ಲೇ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗ ಪಡಿಸಲಿದ್ದಾರೆ.