ಬಹುತಾರಾಗಣದ, ಬಹುಕೋಟಿ ವೆಚ್ಚದ ಚಾಲೆಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಚಿತ್ರ ಮುನಿರತ್ನ ಕುರುಕ್ಷೇತ್ರ ಫೈನಲಿ ಅಖಾಡಕ್ಕೆ ಬರಲು ರೆಡಿ ಆಗಿದೆ. ಇದೀಗ ಆಗಸ್ಟ್ ಒಂಬತ್ತು ಅಂದ್ರೆ ವರಮಹಾಲಕ್ಷ್ಮಿ ಹಬ್ಬಕ್ಕೆ ಬೆಳ್ಳಿ ತೆರೆಮೇಲೆ ಬಹುಕೋಟಿ ವೆಚ್ಚದ ಐತಿಹಾಸಿಕ ಚಿತ್ರ ಕುರುಕ್ಷೇತ್ರ ಅಬ್ಬರಿಸಲು ತೆರೆಗೆ ಬರೋದು ಕನ್ಫರ್ಮ್ ಎಂದಿದೆ. ಈ ಹಿಂದೆ ಆಗಸ್ಟ್ ಎರಡಕ್ಕೆ ಕುರುಕ್ಷೇತ್ರ ತೆರೆ ಕಾಣೋದು ಕನ್ಪರ್ಮ್ ಎಂದಿದ್ದ ಮುನಿರತ್ನ ಈಗ ವರಮಹಾಲಕ್ಷ್ಮಿ ಹಬ್ಬಕ್ಕೆ ಕುರುಕ್ಷೇತ್ರ ಬರೋದು ಪಕ್ಕಾ ಎಂದಿದ್ದಾರೆ.

ಅದೇ ದಿನ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗಿಮಿಕ್ ಚಿತ್ರ ಕೂಡ ತೆರೆಗೆ ಬರ್ತಿದೆ. ಇದೇ ವರಮಹಾಲಕ್ಷ್ಮಿ ಹಬ್ಬಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗಿಮಿಕ್ ಚಿತ್ರ ಕೂಡ ತೆರೆ ಕಾಣುತ್ತಿದೆ. ಒಂದೇ ದಿನ ಇಬ್ಬರೂ ಸ್ಟಾರ್ ನಟರು ಬೆಳ್ಳಿ ತೆರೆ ಮೇಲೆ ಮುಖಾಮುಖಿಯಾಗಲಿದ್ದಾರೆ. ಹಾಗಾಗಿ ಬಾಕ್ಸಾಫೀಸ್​ನಲ್ಲಿ ಕುರುಕ್ಷೇತ್ರ ಚಿತ್ರವನ್ನ ಗಿಮಿಕ್ ಎದುರಿಸುವಂತಾಗಿದೆ.

ಮತ್ತೊಂದು ಇಂಟ್ರಸ್ಟಿಂಗ್ ಮ್ಯಾಟರ್ ಏನಪ್ಪಾ ಅಂದ್ರೆ, ಕುರುಕ್ಷೇತ್ರ ಮತ್ತು ಗಿಮಿಕ್​​ ಎರಡೂ ಸಿನಿಮಾದ ನಿರ್ದೇಶಕರು ಒಬ್ಬರೇ. ನಾಗಣ್ಣ ಒಬ್ಬನೇ ನಿರ್ದೇಶಕನ ಎರಡೆರಡು ಸಿನಿಮಾಗಳು ಒಂದೇ ದಿನ ತೆರೆಗಪ್ಪಳಿಸ್ತಿರೋದು ವಿಶೇಷ. ಹಾಗಂತ ಇದೇ ಫೈನಲ್ ಅಂತ ಹೇಳೋಕೆ ಆಗಲ್ಲ. ಕೊನೆ ಕ್ಷಣದಲ್ಲಿ ನಿರ್ದೇಶಕ ನಾಗಣ್ಣ ಗಿಮಿಕ್ ಚಿತ್ರದ ಡೇಟ್ ಮುಂದೂಡಿದ್ರೂ ಅಚ್ಚರಿ ಪಡ್ಬೇಕಿಲ್ಲ. ಇನ್ ಕೇಸ್ ಒಂದೇ ದಿನ ಗಿಮಿಕ್ ಹಾಗೂ ಮುನಿರತ್ನ ಕುರುಕ್ಷೇತ್ರ ರಿಲೀಸ್ ಆದ್ರೆ ಈ ಬಾರಿಯ ವರಮಹಾಲಕ್ಷ್ಮಿ ಹಬ್ಬ ಡಿ ಬಾಸ್ ಹಾಗೂ ಗೋಲ್ಡನ್ ಸ್ಟಾರ್ ಅಭಿಮಾನಿಗಳಗೆ ಸಖತ್ ಸ್ಪೆಷಲ್ ಆಗಿರಲಿದೆ.