ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾ ಕುರುಕ್ಷೇತ್ರ! ಸತತ 2 ವರ್ಷಗಳಿಂದ ಅಭಿಮಾನಿಗಳು ಕಾಯುತ್ತಲೇ ಇರುವ ‘ಮುನಿರತ್ನ ಕುರುಕ್ಷೇತ್ರ’ದ ಆಡಿಯೋ ರಿಲೀಸ್‍ಗೆ ಡೇಟ್ ಫಿಕ್ಸ್ ಆಗಿದೆ. ಈಗಾಗಲೇ ‘ಕುರುಕ್ಷೇತ್ರ’ ಚಿತ್ರದ ಆಡಿಯೋ ಹಕ್ಕು ದುಬಾರಿ ಬೆಲೆಗೆ ಮಾರಾಟವಾಗಿದ್ದು, ಮುಂದಿನ ತಿಂಗಳಲ್ಲಿ ಆಡಿಯೋ ಬಿಡುಗಡೆ ಮಾಡುವ ತಯಾರಿಯಾಗಿದ್ದು ಜುಲೈ 7ಕ್ಕೆ ನಿಗದಿಪಡಿಸಲಾಗಿದೆ. ಹರಿಕೃಷ್ಣ ಸಂಗೀತ ನೀಡಿರುವ ಹಾಡುಗಳು, ಮತ್ತು ಎಲ್ಲ ಐದೂ ಭಾಷೆಗಳ ಹಾಡುಗಳು ಕೂಡ ಕಾರ್ಯಕ್ರಮದಲ್ಲಿ ಬಿಡುಗಡೆಯಾಗುತ್ತಿವೆ. ಈಗಾಗಲೇ ಚಿತ್ರದ ಡಬ್ಬಿಂಗ್ ಕೆಲಸವೂ ಪೂರ್ತಿಯಾಗಿದ್ದು, ಚಿತ್ರದ ಫೈನಲ್ ಕಾಪಿ ಸಿದ್ದವಾಗಿದೆಯಂತೆ. ಈಗೇನಿದ್ರು ಸೆನ್ಸಾರ್ ಮಂಡಳಿ ಎದುರು ಸಿನಿಮಾ ಹೋಗಲಿದ್ದು, ಆದಷ್ಟೂ ಬೇಗ ಬಿಡುಗಡೆ ದಿನಾಂಕವೂ ಘೋಷಣೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ದರ್ಶನ್ ಅವರ 50 ನೇ ಚಿತ್ರಕ್ಕೆ ನಾಗಣ್ಣ ಆಕ್ಷನ್ ಕಟ್ ಹೇಳಿದ್ದು , ಮುನಿರತ್ನ ಅವರು ಬಂಡವಾಳ ಹಾಕಿದ್ದಾರೆ. ಇದು ಅಂಬರೀಷ್ ಅಭಿನಯಿಸಿರುವ ಕಟ್ಟಕಡೆಯ ಸಿನಿಮಾ. ರವಿಚಂದ್ರನ್ (ಶ್ರೀಕೃಷ್ಣ), ದರ್ಶನ್ (ದುರ್ಯೋಧನ), ಅಂಬರೀಷ್ (ಭೀಷ್ಮ). ಅರ್ಜುನ್ ಸರ್ಜಾ (ಕರ್ಣ), ನಿಖಿಲ್ ಕುಮಾರಸ್ವಾಮಿ (ಅಭಿಮನ್ಯು) , ಶಶಿಕುಮಾರ್, ರವಿಶಂಕರ್, ಸೋನು ಸೂದ್, ಭಾರತಿ ವಿಷ್ಣುವರ್ಧನ್, ಸ್ನೇಹಾ (ದ್ರೌಪದಿ), ಹರಿಪ್ರಿಯಾ, ಮೇಘನಾ ರಾಜ್ (ಭಾನುಮತಿ) ಸೇರಿದಂತೆ ಬಹುತೇಕ ದಕ್ಷಿಣ ಭಾರತ ಚಿತ್ರರಂಗದ ತಾರೆಯರೆಲ್ಲ ಈ ಚಿತ್ರದಲ್ಲಿ ನಟಿಸಿದ್ದಾರೆ.