ಕೆಜಿಎಫ್ ಚಲನಚಿತ್ರವು ಕನ್ನಡ ಚಿತ್ರದ ಕಿರೀಟವಾಗಿದೆ. ಕೆಜಿಎಫ್‌-2 ಶೂಟಿಂಗ್‌ ಈಗ ಭರದಿಂದ ಸಾಗ್ತಿದೆ. ಡೈರೆಕ್ಟರ್ ಪ್ರಶಾಂತ್‌ ನೀಲ್‌ 2020 ರಲ್ಲಿ ಚಿತ್ರ ರಿಲೀಸ್ ಮಾಡಲು ಭರ್ಜರಿ ಪ್ಲಾನ್ ಮಾಡಿಕೊಳ್ತಿದ್ದಾರೆ. ಅಂದ್ಹಾಗೇ, ಕೆಜಿಎಫ್ ಚಾಪ್ಟರ್‌-1, 2200ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಿತ್ತು. ‘ಕೆಜಿಎಫ್’ ಸಿನಿಮಾದಿಂದ ಯಶ್ ಈಗ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ವಿಶೇಷ ಅಂದ್ರೆ, ಪಾಕಿಸ್ತಾನದಲ್ಲೂ ಕೆಜಿಎಫ್‌ ತೆರೆ ಕಂಡು ಅಲ್ಲಿನ ಜನರ ಚಪ್ಪಾಳೆ ಗಿಟ್ಟಿಸಿತ್ತು. ಈಗ ಚಿತ್ರತಂಡ ಚೈನಾ, ಜಪಾನ್‌, ಅಮೆರಿಕಾದಲ್ಲೂ ಕೆಜಿಎಫ್‌ ಚಾಪ್ಟರ್‌-2 ರಿಲೀಸ್ ಮಾಡೋಕೆ ಪ್ಲಾನ್ ಮಾಡ್ತಿದೆ ಎಂದು ಹೇಳಲಾಗ್ತಿದೆ. ಚಾಪ್ಟರ್‌ 1ಗಿಂತ ಚಾಪ್ಟರ್‌-2 ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡ್ಬೇಕು ಅನ್ನೋದು ಇಡೀ ಟೀಮ್‌ನ ಕನಸಾಗಿದೆ. ಹೇಗೆ ಮಾಡೋದು ಅಂತಾ ಬ್ಲ್ಯೂ ಪ್ರಿಂಟ್ ಕೂಡ ರೆಡಿ ಆಗ್ತಿದೆ. ಈ ಮೊದಲು ಐದು ಭಾಷೆಗಳಲ್ಲಿ ತೆರೆ ಕಂಡಿದ್ದ ಕೆಜಿಎಫ್‌ ಚಿತ್ರವು, ಈಗ ಒಟ್ಟು 10 ಭಾಷೆಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.