‘ಇನ್ಸ್ಪೆಕ್ಟರ್ ವಿಕ್ರಂ’ ಟೀಸರ್ ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬದ ಅಂಗವಾಗಿ ಬಿಡುಗಡೆಯಾಗಿತ್ತು, ಟೀಸರ್ ಕುರಿತು ಕ್ರೇಜ್ ಹೆಚ್ಚಾಗಿ ವೈರಲ್ ಆಗುತ್ತಿದ್ದಂತೇ ಅದರ ಹಕ್ಕನ್ನು ಪ್ರತಿಷ್ಠಿತ ಆನಂದ್ ಆಡಿಯೋ ಭರ್ಜರಿ ಮೊತ್ತಕ್ಕೆ ಪಡೆದಿದೆ. ಟೀಸರ್ ಅನ್ನು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ಲಿನಲ್ಲಿ ನೆನ್ನೆ ಬಿಡುಗಡೆ ಮಾಡಲಾಗಿದೆ. ಬಿಡುಗಡೆಗೊಂಡ ಕೆಲವೇ ಗಂಟೆಗಳಲ್ಲಿ ಯಾರೂ ನಿರೀಕ್ಷಿಸಲಾರದಷ್ಟು ವೀಕ್ಷಣೆಗೆ ಒಳಪಡುತ್ತಿದೆ, ಅಲ್ಲದೆ ಟ್ರೆಂಡಿಂಗ್ ಲಿಸ್ಟ್ ಗೆ ಸೇರ್ಪಡೆಯಾಗಿದೆ. ಟೀಸರ್ ನೋಡೋವಾಗ ಪ್ರಜ್ವಲ್ ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ಅಲೆ ಸೃಷ್ಟಿಸುವ ಸುಳಿವನ್ನು ನೀಡಿದೆ.

ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಪ್ರಜ್ವಲ್ ಕಾಣುಸಿಕೊಳ್ಳುತ್ತಿದ್ದಾರೆ. ಇನ್ನು ಸಸ್ಪೆನ್ಸ್ ರೋಲ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ ಎಂಟ್ರಿ ಕೂಡ ಇದೆ. ಅಷ್ಟೇ ಅಲ್ಲದೆ ಈ ಚಿತ್ರದಲ್ಲಿ ರಘು ಮುಖರ್ಜಿ ಇದೇ ಮೊದಲ ಬಾರಿಗೆ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಶ್ರೀ ನರಸಿಂಹ ಆ್ಯಕ್ಷನ್ ಕಟ್ ಹೇಳಿದ್ದು ಎ.ಆರ್. ವಿಖ್ಯಾತ್ ಪ್ರೊಡಕ್ಷನ್ ಹೌಸ್ ನಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಚಿತ್ರದ ಬಹುತೇಕ ಚಿತ್ರೀಕರಣ ಕೊನೆ ಹಂತದಲ್ಲಿದ್ದು ದಸರಾಗೆ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಮಾಪಕ ವಿಖ್ಯಾತ ಪ್ಲಾನ್ ಮಾಡಿದ್ದಾರೆ.