ದಿನಕರ್ ತೂಗುದೀಪ ಅವರು ತಮ್ಮ ಸಹೋದರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಮತ್ತೊಮ್ಮೆ ನಿರ್ದೇಶಿಸಲು ಸಜ್ಜಾಗಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ‘ಶಿವನಂದಿ’ ಎಂಬುದೀಗ ಫೇಮಸ್ ಆಗಿರುವ ಹೆಸರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕತ್ವದ ‘ಯಜಮಾನ’ ಸಿನಿಮಾದ ಟೈಟಲ್ ಸಾಂಗ್ ಶಿವನಂದಿ. ‘ಯಜಮಾನ’ ಸಿನಿಮಾದಲ್ಲಿ ‘ಶಿವನಂದಿ’ ಎನ್ನುವ ಹೆಸರು ಬಹಳ ಪ್ರಾಮುಖ್ಯತೆ ಹೊಂದಿತ್ತು. ಇದೀಗ ಚಿತ್ರದ ಬೆನ್ನಲುಬಿನಂತಿದ್ದ ‘ಶಿವನಂದಿ’ ಎಂಬ ಪದವನ್ನೇ ಶಿರ್ಷಿಕೆಯಾಗಿಸಿ ಚಿತ್ರ ನಿರ್ಮಿಸಲು ಭರ್ಜರಿ ಪ್ಲ್ಯಾನ್ ಸಿದ್ಧವಾಗುತ್ತಿದೆ.

ನಿರ್ದೇಶಕ ದಿನಕರ್ ತೂಗುದೀಪ್ ಈ ಟೈಟಲ್ ಮೇಲೆ ಆಸಕ್ತಿ ತೋರಿ ಅದನ್ನು ಫಿಲಂ ಚೇಂಬರ್‌ನಲ್ಲಿ ರಿಜಿಸ್ಟರ್ ಮಾಡಿಸುತ್ತಲೇ ಹೊಸ ಸುದ್ದಿಯೊಂದು ಗಾಂಧಿನಗರದಲ್ಲಿ ಹುಟ್ಟಿಕೊಂಡಿದೆ. ಯಜಮಾನ ಸಿನಿಮಾ ಬಳಿಕ ‘ಶಿವನಂದಿ’ ಹೆಸರು ಹೆಚ್ಚು ಸೂಟ್ ಆಗುವುದು ದರ್ಶನ್ ಅವರಿಗೇ ಎನ್ನಬಹುದು. ‘ನವಗ್ರಹ’ ಮತ್ತು ಸಾರಥಿ ಚಿತ್ರ ಬಳಿಕ ತೂಗುದೀಪ ಸಹೋದರರಿಂದ ಒಂದು ವಿಭಿನ್ನ ಚಿತ್ರಕ್ಕಾಗಿ ಕಾಯುತ್ತಿದ್ದ ಡಿ ಬಾಸ್ ಅಭಿಮಾನಿಗಳಿಗೆ ಈ ಸುದ್ದಿಯಂತು ಖುಷಿ ನೀಡಿದೆ.