ಪ್ರಜ್ವಲ್ ದೇವರಾಜ್ ಮತ್ತು ಭಾವನ ಮೆನನ್ ಅಭಿನಯದ ಇನ್ಸ್‍ಪೆಕ್ಟರ್ ವಿಕ್ರಂ ಚಿತ್ರದಲ್ಲಿ ದರ್ಶನ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ದರ್ಶನ್ ಅವರದ್ದು ಭಗತ್ ಸಿಂಗ್ ಕ್ಯಾರೆಕ್ಟರ್. ಈ ಐತಿಹಾಸಿಕ ಪಾತ್ರದಲ್ಲಿ ದರ್ಶನ್ ಮಿಂಚಲಿದ್ದಾರೆ ಎಂದು ತಿಳಿದು ಬಂದಿದ್ದು, ಚಿತ್ರದಲ್ಲಿ ದರ್ಶನ್ ಪಾತ್ರವು ಕುತೂಹಲ ಮೂಡಿಸಿದೆ. ಈ ಚಿತ್ರದಲ್ಲಿ ಇನ್ಸ್ಪೆಕ್ಟರ್ ವಿಕ್ರಮನಾಗಿ ಪ್ರಜ್ವಲ್ ಕಾಣಿಸಿಕೊಂಡರೆ ಖಾಕಿ ವಿರುದ್ಧ ಖಳ ನಟನಾಗಿ ರಘು ಮುಖರ್ಜಿ ಎಂಟ್ರಿ ಕೊಡಲಿದ್ದಾರೆ. ಈ ಎರಡು ಪಾತ್ರಗಳ ನಡುವೆ ಟ್ವಿಸ್ಟ್ ಕೊಡುವ ಭಗತ್ ಸಿಂಗ್ ಪಾತ್ರವೊಂದನ್ನು ನಿರ್ದೇಶಕ ನರಸಿಂಹ ಸೃಷ್ಟಿಸಿದ್ದಾರೆ. ಅಂದಹಾಗೆ, ಇನ್ಸ್ಪೆಕ್ಟರ್ ವಿಕ್ರಂ ಚಿತ್ರದಲ್ಲಿರುವ ಡಿ ಬಾಸ್ ಪಾತ್ರವು ಸಿನಿ ರಸಿಕರಿಗೆ ಚಿತ್ರದ ಮೇಲಿರುವ ಕುತೂಹಲ ಇಮ್ಮಡಗೊಳಿಸುತ್ತಿದೆ. ಚಿತ್ರಕ್ಕೆ ಅನೂಪ್ ಸೀಳಿನ್ ಅವರ ಸಂಗೀತ ಮತ್ತು ಮಫ್ತಿ ನವೀನ್ ಕುಮಾರ್ ಅವರ ಛಾಯಾಗ್ರಹಣವಿದೆ.