ಈ ವರ್ಷದ ಬ್ಲಾಕ್ ಬಾಸ್ಟರ್ ಹಿಟ್ ಸಿನಿಮಾ, ಜಯತೀರ್ಥ ನಿರ್ದೇಶನದ ‘ಬೆಲ್ ಬಾಟಂ’ ಯಶಸ್ವಿಯಾಗಿ 125 ದಿನಗಳನ್ನು ಪೂರೈಸಿ 150 ದಿನಗಳತ್ತ ಮುನ್ನುಗ್ಗುತ್ತಿದೆ. ಡಿಟೆಕ್ಟಿವ್ ದಿವಾಕರನಾಗಿ ನಿರ್ದೇಶಕ ರಿಷಭ್ ಶೆಟ್ಟಿ ಕಾಣಿಸಿಕೊಂಡರೆ, ಕುಸುಮ ಪಾತ್ರದಲ್ಲಿ ಹರಿಪ್ರಿಯಾ ಮಿಂಚಿದ್ದಾರೆ. ಕರ್ನಾಟಕ ಹಾಗು ಹೊರ ದೇಶಗಳಲ್ಲಿ ಬಿಡುಗಡೆಯಾಗಿ ಯಶಸ್ವಿಯಾದ ‘ಬೆಲ್ ಬಾಟಮ್’ ಇದೀಗ ಜಪಾನ್ ನಲ್ಲಿ ಬಿಡುಗಡೆಯಾಗಲಿದೆ.

ಈಗಾಗಲೆ ಬಹುತೇಕ ದೇಶಗಳನ್ನು ಸುತ್ತಿರುವ ದಿವಾಕರ ಈಗ ಇದೇ ಸೆಪ್ಟೆಂಬರ್ ನಲ್ಲಿ ಜಪಾನ್ ಗೆ ಹೊರಟಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರವಾಗಿದೆ. ಈಗಾಗಲೆ ‘ಬೆಲ್ ಬಾಟಂ’ ಸಿನಿಮಾ ಯು.ಎಸ್.ಎ, ಯುಕೆ, ಸಿಂಗಾಪೂರ್ ನಲ್ಲಿರುವ ಕನ್ನಡಿಗರಿಗೆ ಮಸ್ತ್ ಮಜಾ ಕೊಟ್ಟಿದೆ. ಈಗ ಜಪಾನ್ ಗೆ ಲಗ್ಗೆ ಇಡುವುದು ಚಿತ್ರತಂಡಕ್ಕೆ ಸಂತಸದ ವಿಚಾರವಾಗಿದೆ. ಚಿತ್ರ ಈಗಾಗಲೆ ಕಿರುತೆರೆಯಲ್ಲಿ ಪ್ರಸಾರವಾದರು ಸಹ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವುದು ಕನ್ನಡಿಗರಿಗೆ ಖುಷಿ ಉಂಟು ಮಾಡಿದೆ.