ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ತರುಣ್ ಸುಧೀರ್ ಕಾಂಬಿನೇಷನ್​ನಲ್ಲಿ ರೆಡಿಯಾಗುತ್ತಿರುವ ‘ರಾಬರ್ಟ್’​ ಮತ್ತೆ ಸದ್ದು ಮಾಡುತ್ತಿದೆ. ದರ್ಶನ್​ ಕೆರಿಯರ್​ನಲ್ಲೇ ಸೂಪರ್ ಡೂಪರ್ ಹಿಟ್ ನೀಡಲು ಪಣತೊಟ್ಟಿರುವ ನಿರ್ದೇಶಕ ತರುಣ್ ಸುಧೀರ್​ ರಾಬರ್ಟ್​ ಅನ್ನು ವಿಭಿನ್ನ ಕ್ವಾಲಿಟಿಯಲ್ಲಿ ಚಿತ್ರೀಕರಿಸಲಾಗುತ್ತಿದೆ. ಈಗಾಗಲೇ ಕೆಲ ಆ್ಯಕ್ಷನ್ ಸೇರಿದಂತೆ ಶೇ. 70 ರಷ್ಟು ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಪ್ರತಿಯೊಂದು ಶೆಡ್ಯೂಲ್​ನಲ್ಲಿ ವಿಭಿನ್ನ ಭಾಗಗಳಲ್ಲಿ ಚಿತ್ರೀಕರಿಸುವುದರಿಂದ ಚಿತ್ರದ ಮೇಕಿಂಗ್​ ಹೇಗಿರಲಿದೆ ಎಂಬ ಕುತೂಹಲ ಮೂಡಿಸಿದೆ. ಅದಕ್ಕಾಗಿ ಅತ್ಯಾಧುನಿಕ ಕ್ಯಾಮೆರಾ, ಅದ್ಧೂರಿ ಸೆಟ್​ಗಳನ್ನು ನಿರ್ಮಿಸಲಾಗಿದೆ.

ಒಂದು ಮೂಲದ ಪ್ರಕಾರ ಹಾಲಿವುಡ್​ ಚಿತ್ರ ಡಾರ್ಕ್​ ನೈಟ್​ ಮಾದರಿಯಲ್ಲಿ ರಾಬರ್ಟ್ ಮೇಕಿಂಗ್ ನಡೆಯುತ್ತಿದೆಯಂತೆ. ರಾಬರ್ಟ್ ದರ್ಶನ್​ ಅವರ ಕೆರಿಯರ್​ನ ಬ್ಲಾಕ್ ಬ್ಲಸ್ಟರ್ ಸಿನಿಮಾವಾಗುವಂತೆ ನೋಡಿಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಗಾಂಧಿನಗರದಲ್ಲಿದೆ. ಇನ್ನು ದರ್ಶನ್ ಆಪ್ತರಲ್ಲಿ ಒಬ್ಬರಾಗಿರುವ ನಿರ್ಮಾಪಕ ಉಮಾಪತಿ ಕೂಡ ಬಂಡವಾಳ ಸುರಿಯಲು ಹಿಂದೆ ಮುಂದೆ ನೋಡುತ್ತಿಲ್ಲ.
ಈ ಎಲ್ಲಾ ಕಾರಣದಿಂದ ರಾಬರ್ಟ್​ ದಿನ ಕಳೆದಂತೆ ದಾಸ ಅಭಿಮಾನಿಗಳ ನಿರೀಕ್ಷೆಯನ್ನು ಡಬಲ್ ಮಾಡುತ್ತಾ ಹೋಗುತ್ತಿದೆ.
ದರ್ಶನ್​ಗೆ ನಾಯಕಿಯಾಗಿ ಆಶಾ ಭಟ್ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೆಯೇ ದೇವರಾಜ್, ಚಿಕ್ಕಣ್ಣ, ಟಾಲಿವುಡ್ ನಟ ಜಗಪತಿ ಬಾಬು, ವಿನೋದ್ ಪ್ರಭಾಕರ್ ಸೇರಿದಂತೆ ಬಹುತಾರಾಗಣದ ದಂಡೇ ಚಿತ್ರದಲ್ಲಿದೆ.