‘ಡಿಂಪಲ್ ಕ್ವೀನ್’ ಖ್ಯಾತಿಯ ರಚಿತಾ ರಾಮ್ ಈಗ ಮತ್ತೊಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಅರಮನೆ, ಸಂಜು ವೆಡ್ಸ್ ಗೀತಾ, ಮೈನಾ ಸೇರಿದಂತೆ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿರುವ ನಿರ್ದೇಶಕ ನಾಗಶೇಖರ್ ಇದೀಗ ‘ಸಂಜಯ್ ಅಲಿಯಾಸ್ ಸಂಜು’ ಹೆಸರಿನ ಹೊಸ ಚಿತ್ರವನ್ನು ಮಾಡಲು ಮುಂದಾಗಿದ್ದಾರೆ. ಈ ಚಿತ್ರಕ್ಕೆ ನಾಯಕಿಯಾಗಿ ರಚಿತಾ ರಾಮ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಚಿತ್ರದಲ್ಲಿ ರಚಿತಾ ಪಾತ್ರ ತುಂಬ ವಿಭಿನ್ನವಾಗಿರಲಿದೆಯಂತೆ. ಸಂಜು ಪಾತ್ರಕ್ಕೆ ಹೊಂದಿಕೆಯಾಗಬಲ್ಲ ನಾಯಕನನ್ನು ನಾಗಶೇಖರ್ ಹುಡುಕುತ್ತಿದ್ದಾರಂತೆ. ಇದು ರೋಮ್ಯಾನ್ಸ್-ಆಕ್ಷನ್-ಕಾಮಿಡಿ ಎಂಟರ್ಟೈನರ್ ಆಗಿರುತ್ತದೆ ಮತ್ತು ಯುವ ಪ್ರೇಕ್ಷಕರನ್ನು ಆಕರ್ಷಿಸಲು ನಿರ್ದೇಶಕರು ಬೇಕಾಗಿರುವ ಎಲ್ಲಾ ಅಂಶಗಳನ್ನು ತುಂಬುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸದ್ಯ ನಾಗಶೇಖರ್ ಬಾಲಿವುಡ್ ಕಡೆ ಮುಖ ಮಾಡಿ ಹೊರಟಿದ್ದಾರೆ. ಕನ್ನಡದ ‘ಮೈನಾ’ ಸಿನಿಮಾವನ್ನು ಹಿಂದಿಗೆ ರಿಮೇಕ್ ಮಾಡುತ್ತಿದ್ದಾರೆ. ಈ ಸಿನಿಮಾ ಮುಗಿದ ಬಳಿಕ ‘ಸಂಜಯ್ ಅಲಿಯಾಸ್ ಸಂಜು’ ಸಿನಿಮಾವನ್ನು ಕೈಗೆತ್ತಿಕೊಳ್ಳಲಿದ್ದಾರೆ ನಿರ್ದೇಶಕ ನಾಗಶೇಖರ್.