ಉಗ್ರಂ ಚಿತ್ರದ ನಂತರ ‘ ಉಗ್ರಂ ವೀರಂ ‘ ನಲ್ಲಿ ಪ್ರಶಾಂತ್ ಮುರಳಿ ಒಂದಾಗ್ತಾರೆ ಅನ್ನೋ ಸುದ್ದಿಯಾಗಿತ್ತು . ಆದರೆ ಈ ಗ್ಯಾಪ್‌ನಲ್ಲೇ ಮತ್ತೊಂದು ಸಿನಿಮಾಗೆ ಇಬ್ಬರೂ ಸಿದ್ದರಾಗಿದ್ದಾರೆ . ಇದೀಗ ಮುರಳಿ – ಪ್ರಶಾಂತ್ ಮತ್ತೊಮ್ಮೆ ಒಂದಾಗಿದ್ದಾರೆ . ಹೀರೋ ಜಾಗದಲ್ಲಿ ಮುರಳಿ ಇರ್ತಾರೆ . ಆದರೆ ನಿರ್ದೇಶಕ ಜಾಗದಲ್ಲಿ ಪ್ರಶಾಂತ್ ನೀಲ್ ಇರೋದಿಲ್ಲ . ಬದಲಾಗಿ ಗೆಳೆಯನ ಸಿನಿಮಾಗೆ ಪ್ರೊಡ್ಯೂಸರ್ ಆಗಿ ಸಾಥ್ ಕೊಡ್ತಿದ್ದಾರೆ . ಸದ್ಯಕ್ಕೆ ಪ್ರೊಡಕ್ಷನ್ 7 ಅಂತಾ ಹೆಸರಿಟ್ಟಿರೋ ಸಿನಿಮಾಗೆ ಡಾ . ಸೂರಿ ನಿರ್ದೇಶನವಿದೆ . ಕಥೆಯನ್ನು ಸ್ವತಃ ಸೂರಿಯೇ ಸಿದ್ಧಪಡಿಸಿಕೊಂಡಿದ್ದಾರೆ . ಶ್ರೀ ಸ್ವರ್ಣ ಲತಾ ಪ್ರೊಡಕ್ಷನ್‌ನಲ್ಲಿ ಸಿನಿಮಾ ನಿರ್ಮಾಣ ಆಗಲಿದೆ . ಸದ್ಯ ಶ್ರೀಮುರುಳಿ ಮದಗಜ ಸಿನಿಮಾದಲ್ಲಿ ಬ್ಯುಸಿ ಆಗಿರೋದ್ರಿಂದ , ಮದಗಜ ನಂತರ ಈ ಸಿನಿಮಾ ಸೆಟ್ಟೇರಲಿದೆ .