ಚಾಲೆಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಚಿತ್ರ ಕುರುಕ್ಷೇತ್ರ ಪೌರಾಣಿಕ ಮತ್ತು 3ಡಿ ಯಲ್ಲಿ ತಾಯಾರಿಯಾಗಿದ್ದು ಇಡೀ ಚಿತ್ರರಂಗದ ಕಣ್ಣು ಈ ಚಿತ್ರದ ಮೇಲಿತ್ತು. ನಿರೀಕ್ಷೆಯಂತೆ ಆಗಸ್ಟ್ 9 ಕ್ಕೆ ಸಿನಿಮಾ ರಿಲೀಸ್ ಆಗಿದ್ದು ಡಿ ಬಾಸ್ ಭಕ್ತಗಣ ದುರ್ಯೋಧನನ ಎಂಟ್ರಿ ನೋಡಿ ಫುಲ್ ಖುಷ್ ಆಗಿದ್ದಾರೆ. ಚಿತ್ರ ಬಿಡುಗಡೆಯ ನಂತರ ಈಗೊಂದು ಚರ್ಚೆ ಅಭಿಮಾನಿ ವಲಯದಲ್ಲಿ ಸದ್ದು ಮಾಡ್ತಿದೆ ಏನಂದ್ರೆ ರಾಜಮೌಳಿ ಮಹಾಭಾರತದಲ್ಲಿ ದರ್ಶನ್ ‘ದುರ್ಯೋಧನ’ ಫಿಕ್ಸ್ ಎನ್ನುತ್ತಿದ್ದಾರೆ. ‘ಸದ್ಯಕ್ಕೆ ಮಹಾಭಾರತ ಸಿನಿಮಾ ಮಾಡುವ ಯೋಚನೆ ಇಲ್ಲ’ ಎಂದಿದ್ದ ರಾಜಮೌಳಿ, ಕುರುಕ್ಷೇತ್ರ ನೋಡಿದ್ಮೇಲೆ ದರ್ಶನ್ ಅವರನ್ನು ದುರ್ಯೋಧನ ನ್ನಾಗಿ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ರಾಜಮೌಳಿ ಮಹಾಭಾರತಕ್ಕೆ ಕೈ ಹಾಕಿದ್ರೆ ಅದು ಭಾರತೀಯ ಸಿನಿಮಾ ಇತಿಹಾಸದಲ್ಲಿ ಹೊಸ ಪುಟವಾಗಬಹುದು. ಮೂಲತಃ ಕರ್ನಾಟಕದವರಾಗಿರುವ ರಾಜಮೌಳಿಯ ಚಿತ್ರಗಳು ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ನಲ್ಲಿ ಇರುತ್ತೆ. ರಾಜಮೌಳಿ ಮಹಾಭಾರತ ಮಾಡಿದ್ರೆ ದರ್ಶನ್ ದುರ್ಯೋಧನ ಪಾತ್ರಕ್ಕೆ ಫಿಕ್ಸ್ ಎಂಬುದು ಅಭಿಮಾನಿಗಳ ಈಗಿನ ಅಭಿಪ್ರಾಯ. ದುರ್ಯೋಧನ ಪಾತ್ರಕ್ಕಾಗಿ ರಾಜಮೌಳಿ ಹುಡುಕೋದೇ ಬೇಡ. ಅದಕ್ಕಾಗಿ ಡಿ-ಬಾಸ್ ಅವರನ್ನ ಈಗಲೇ ಫಿಕ್ಸ್ ಮಾಡಿಕೊಳ್ಳಲಿ ಎಂದು ಡಿ ಫ್ಯಾನ್ಸ್ ಹೇಳುತ್ತಿದ್ದಾರೆ. ಬಹುಶಃ ಕುರುಕ್ಷೇತ್ರ ನೋಡಿದ್ಮೇಲೆ ರಾಜಮೌಳಿ ಮನಸ್ಸಿನಲ್ಲಿ ದರ್ಶನ್ ಗಾಗಿ ಒಂದು ಪಾತ್ರ ಈಗಲೇ ರಿಸರ್ವ್ ಮಾಡಿಕೊಂಡರು ಅಚ್ಚರಿ ಇಲ್ಲ ಎಂಬ ಮಾತುಗಳು ಸದ್ದು ಮಾಡ್ತಿದೆ.