ದಕ್ಷಿಣ ಭಾರತದ ಸ್ಟಾರ್ ನಟರ ನೆಚ್ಚಿನ ಹೀರೋಯಿನ್ ಎನಿಸಿಕೊಂಡಿರುವ ರಶ್ಮಿಕಾ ಮಂದಣ್ಣಗೆ ಒಂದರ ಮೇಲೊಂದು ಚಿತ್ರಗಳು ಹುಡುಕಿಕೊಂಡು ಬರುತ್ತಲೇ ಇದೆ. ಈಗ ಇನ್ನೊಬ್ಬ ಸ್ಟಾರ್ ನಟನ ಚಿತ್ರಕ್ಕೆ ನಾಯಕಿಯಾಗಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಹಿಂದಿಯಲ್ಲಿ ಸೂಪರ್ ಹಿಟ್ ಆಗಿದ್ದ ‘ಬದಾಯಿ ಹೋ’ ಚಿತ್ರವನ್ನ ತೆಲುಗಿನಲ್ಲಿ ರೀಮೇಕ್ ಮಾಡಲಾಗುತ್ತಿದ್ದು, ಈ ಚಿತ್ರದಲ್ಲಿ ನಾಗಚೈತನ್ಯ ಮತ್ತು ರಶ್ಮಿಕಾ ನಟಿಸುವ ಸಾಧ್ಯತೆ ಇದೆ. ಈ ಚಿತ್ರಕ್ಕೆ “ಅದೇ ನುವ್ವು ಅದೇ ನೇನು” ಎಂದು ಹೆಸರಿಡಲಾಗಿದೆಯಂತೆ. ನಾಗ ಚೈತನ್ಯ ಹಾಗೂ ರಶ್ಮಿಕಾ ಮಂದಣ್ಣ ಸದ್ಯ ಟಾಲಿವುಡ್ನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಇದರ ನಡುವೆಯೇ ಈ ಜೋಡಿಯ ಹೊಸ ಸಿನಿಮಾ ಪ್ರಕಟವಾಗಿದೆ. ಈ ವಿಷಯವನ್ನು ಜೆಮಿನಿ ಟಿವಿ ತನ್ನ ಅಧಿಕೃತ ಟ್ವಿಟರ್ ಪುಟದಲ್ಲಿ ಪ್ರಕಟಿಸಿದೆ. ಹೊಸಬರು ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.