‘ಭೈರತಿ ರಣಗಲ್ಲು’ ಪಾತ್ರ ಮಾಡಿದ್ದು ಸ್ಯಾಂಡಲ್ ವುಡ್ ಕಿಂಗ್ ಶಿವರಾಜ್ ಕುಮಾರ್. ನೂರಕ್ಕೂ ಹೆಚ್ಚು ಸಿನಿಮಾ ಮಾಡಿರುವ ಶಿವಣ್ಣ ‘ಮಫ್ತಿ’ಯಲ್ಲಿ ಮಾಡಿದ ಪಾತ್ರ ತುಂಬ ವಿಭಿನ್ನ ಮತ್ತು ವಿಶೇಷವಾಗಿತ್ತು.

‘ಮಫ್ತಿ’ ಸಿನಿಮಾದ ಶಿವರಾಜ್ ಕುಮಾರ್ ಪಾತ್ರ ಸಿನಿಮಾ ಆಗುತ್ತಿದೆ. ‘ಭೈರತಿ ರಣಗಲ್ಲು’ ಪಾತ್ರದ ಪೂರ್ವಕಥೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗುತ್ತದೆ. ಮುಂದಿನ ವರ್ಷ ಚಿತ್ರ ಪ್ರಾರಂಭ ಆಗಲಿದೆ. ಆದರೆ ಆ ಪಾತ್ರ ಹೇಗೆ ಹುಟ್ಟಿದ್ದು ಹೇಗೆ ಎಂಬ ಕುತೂಹಲಕಾರಿ ವಿಷಯವನ್ನು ಚಿತ್ರದ ನಿರ್ದೇಶಕ ನರ್ತನ್ ಬಿಚ್ಚಿಟ್ಟಿದ್ದಾರೆ.

‘ಭರಾಟೆ’ ಸಿನಿಮಾದ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನರ್ತನ್ ತಮ್ಮ ‘ಭೈರತಿ ರಣಗಲ್ಲು’ ಚಿತ್ರದ ಪ್ರಶ್ನೆಗಳಿಗೆ ಉತ್ತರ ನೀಡಿದರು. ಈ ಸಿನಿಮಾದ ಕಥೆಯ ಕೆಲಸಗಳು ಸದ್ಯ ನಡೆಯುತ್ತಿದ್ದು, 2020ಕ್ಕೆ ಸಿನಿಮಾ ಲಾಂಚ್ ಆಗಲಿದೆಯಂತೆ. ಭೈರತಿ ರಣಗಲ್ಲು ಪಾತ್ರದ ಹಿನ್ನಲೆಯೇ ಈ ಚಿತ್ರದ ನಿರೂಪಣೆ ಆಗಲಿದೆ ಎನ್ನುವುದು ನರ್ತನ್ ಮಾತಿನ ಮೂಲಕ ತಿಳಿಯುತ್ತಿದೆ.

ಶಿವಣ್ಣ ಬಂಡವಾಳ ಹಾಕುತ್ತಿರುವ ಮೊದಲ ಸಿನಿಮಾ ಇದಾಗಿದೆ. ಈ ಸಿನಿಮಾದ ನಂತರ ಶ್ರೀ ಮುರಳಿ ಜೊತೆಗೆ ನರ್ತನ್ ಮತ್ತೊಂದು ಸಿನಿಮಾ ಮಾಡುವ ಯೋಚನೆ ಇದೆ ಎಂದು ತಿಳಿಸಿದ್ದಾರೆ.