ಅಕ್ಟೋಬರ್ 18 ಕ್ಕೆ ‘ಭರಾಟೆ’ ಸಿನಿಮಾ ಬಿಡುಗಡೆಯಾಗಿದೆ. ರಾಜ್ಯಾದ್ಯಂತ ಮೊದಲ ದಿನ ಸಿನಿಮಾಗೆ ದೊಡ್ಡ ಓಪನಿಂಗ್ ಸಿಕ್ಕಿದೆ. ಪಕ್ಕಾ ಮಾಸ್ ಸಿನಿಮಾ ಆಗಿರುವ ‘ಭರಾಟೆ’ ಪ್ರೇಕ್ಷರಿಗೆ ಇಷ್ಟ ಆಗಿದೆ. ಟ್ರೈಲರ್ ಮತ್ತು ಹಾಡುಗಳ ಮೂಲಕ ಭಾರೀ ಕುತೂಹಲ ಹುಟ್ಟುಹಾಕಿದ್ದ ಭರಾಟೆ ಬಗ್ಗೆ ಉತ್ತಮ ವಿಮರ್ಶೆ ಕೇಳಿ ಬಂದಿದೆ. ಬಹುತೇಕ ಎಲ್ಲ ಚಿತ್ರಮಂದಿರಗಳು ಹೌಸ್ ಫುಲ್ ಆಗಿವೆ.

ಅಂದಹಾಗೆ, ‘ಭರಾಟೆ’ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ವಿವರ ಹೀಗಿದೆ. ‘ಭರಾಟೆ’ ಸಿನಿಮಾದ ಮೊದಲ ದಿನವೇ ಕರ್ನಾಟಕದಲ್ಲಿ ಮಾತ್ರ ಬರೋಬ್ಬರಿ 8.36 ಕೋಟಿ ಕಲೆಕ್ಷನ್ ಮಾಡಿದೆ. ಬೆಂಗಳೂರು, ಕೋಲಾರ, ಶಿವಮೊಗ್ಗ, ಹುಬ್ಬಳ್ಳಿ, ದಾವಣಗೆರೆ, ಮಂಗಳೂರು, ಮಂಡ್ಯ, ಹಾಸನ, ಮೈಸೂರು ಹಾಗೂ ತುಮಕೂರು ಮುಂತಾದ ಜಿಲ್ಲೆಗಳಿಂದ ಭರ್ಜರಿ ಕಲೆಕ್ಷನ್ ಬಂದಿದೆ. ರಾಜ್ಯದ ಎಲ್ಲ ಭಾಗದಲ್ಲಿಯೂ ಸಿನಿಮಾಗೆ ಒಳ್ಳೆಯ ಮಾತುಗಳು ಕೇಳಿ ಬಂದಿವೆ. ಇತ್ತೀಚಿಗೆ ಬಂದ ಕನ್ನಡ ಸಿನಿಮಾಗಳ ಪೈಕಿ ಮೊದಲ ದಿನ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರಗಳ ಸಾಲಿಗೆ ‘ಭರಾಟೆ’ ಕೂಡ ಸೇರಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಚಿತ್ರದ ಗಳಿಕೆಯು ಏರುಗತಿಯಲ್ಲಿ ಸಾಗಲಿದೆ ಎಂದು ಹೇಳಲಾಗುತ್ತಿದೆ.

ಶ್ರೀಮುರಳಿ ಎರಡು ರೀತಿಯ ಪಾತ್ರದಲ್ಲಿ ನಟಿಸಿದ್ದಾರೆ. ಶ್ರೀಲೀಲಾ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಸಾಯಿ ಕುಮಾರ್, ರವಿಶಂಕರ್, ಅಯ್ಯಪ್ಪ, ತಾರ, ಸುಮನ್, ರಂಗಾಯಣ ರಘು ನಟನೆ ಸಿನಿಮಾಗೆ ಪ್ಲಸ್ ಆಗಿದೆ.