ಇತ್ತೀಚೆಗೆ ಭಾರತೀಯ ಚಿತ್ರರಂಗದಲ್ಲೇ ಭಾರೀ ಸದ್ದು ಮಾಡುತ್ತಿರುವ ಚಿತ್ರ ಅವನೇ ಶ್ರೀಮನ್ನಾರಾಯಣ, ನಮ್ಮ ಕನ್ನಡದ ಅವನೇ ಶ್ರೀಮನ್ನಾರಾಯಣ.

ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾಸ್ತವ, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಬಾಲಾಜಿ ಮನೋಹರ್ ತಾರಾಗಣದಲ್ಲಿ ಬಹುಕೋಟಿ ರೂಪಾಯಿ ವೆಚ್ಚದಲ್ಲಿ ಚಿತ್ರೀಕರಣ ಮುಗಿಸಿ Post Production ಹಂತದಲ್ಲಿರುವ ಚಿತ್ರ!

ಚಿತ್ರಕ್ಕೆ ಉಳಿದವರು ಕಂಡಂತೆ, ಕಿರಿಕ್ ಪಾರ್ಟಿ, ಬೆಲ್ ಬಾಟಮ್ ಹೀಗೆ ಅನೇಕ ಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿ ಕೆಲಸ ನಿರ್ವಹಿಸಿದ ಬಿ.ಅಜನೀಶ್ ಲೋಕ್ ನಾಥ್ ರವರು 02 ಹಾಡುಗಳನ್ನು ಹಾಗೂ ಹಿನ್ನೆಲೆ ಸಂಗೀತ ನೀಡುತ್ತಿರುವುದು ಒಂದು ವಿಶೇಷ!

ಹೌದು! ಸಧ್ಯ ಅಜನೀಶ್ ಲೋಕ್ ನಾಥ್ ಅವರು ಅವನೇ ಶ್ರೀಮನ್ನಾರಾಯಣನ 2 ಹಾಡುಗಳಿಗೆ ಸಂಗೀತ ನೀಡುವುದರ ಜೊತೆಗೆ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಯೂರೋಪ್ ನ ಮ್ಯಾಸಿಡೋನಿಯಾದ ಆರ್ಕೇಸ್ಟ್ರಾ ಕಂಪೆನೆಯೊಂದಿಗೆ ಒಡಗೂಡಿ ಅವನೇ ಶ್ರೀಮನ್ನಾರಾಯಣ ಚಿತ್ರದ ಕೆಲ Theme Song ಗಳಿಗೆ ಸಂಗೀತ ನೀಡುವ ಕೆಲಸದಲ್ಲಿ ಅಜ್ಜು Busy ಆಗಿದ್ದಾರೆ. ಇದೇ ಆರ್ಕೇಸ್ಟ್ರಾ ಕಂಪೆನೆಯೊಂದಿಗೆ ಈ ಹಿಂದೆ ಭಾರತದ ಮೇರು ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ರವರು ಕೆಲಸ ಮಾಡಿದ್ದನ್ನು ಸ್ಮರಿಸಬಹುದು.

ಚಿತ್ರದಲ್ಲಿ 07 Theme Music ಗಳಿದ್ದು, ಏಳೂ ಅದ್ಭುತವಾಗಿ ಮೂಡಿಬರುತ್ತಿವೆ. ಚಿತ್ರದಲ್ಲಿರುವ ನಾಗಾರ್ಜುನ್ ಶರ್ಮಾ ರವರು ಬರೆದಿರುವ Introduction Song ಗೆ ಹಾಗೂ ಕ್ಲೈಮ್ಯಾಕ್ಸ್ ನಲ್ಲಿ ಬರುವ Protogonist ನಾರಾಯಣನ Climax Number ಗೆ ಅಜನೀಶ್ ಸಂಗೀತ ನೀಡಿದ್ದಾರೆ.

ಪುಷ್ಕರ್ ಮಲ್ಲಿಕಾರ್ಜುನಯ್ಯ ಹಾಗೂ ಹೆಚ್ ಕೆ ಪ್ರಕಾಶ್ ರವರ ಸಹ ನಿರ್ಮಾಣದಲ್ಲಿ ಮೂಡಿಬಂದಿರುವ ಸಚಿನ್ ರವಿ ಅವರ ಚೊಚ್ಚಲ ನಿರ್ದೇಶನದ ಅವನೇ ಶ್ರೀಮನ್ನಾರಾಯಣ ಇದೇ ಡಿಸೆಂಬರ್ 27 ರಂದು ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಸೇರಿ ಒಟ್ಟು 05 ಭಾಷೆಗಳಲ್ಲಿ ಏಕಕಾಲಕ್ಕೆ ತೆರೆ ಕಾಣಲಿದೆ.