ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ್ ಮೂರ್ತಿ ಅವರ ಜೀವನಚರಿತ್ರೆ ಇದೀಗ ಬಯೋ ಪಿಕ್ ಆಗಲಿದೆ ಎಂದು ವರದಿಯಾಗಿದೆ. ಜಾಗತಿಕ ಮಟ್ಟದಲ್ಲಿ ಕನ್ನಡ ಹಾಗೂ ಕರ್ನಾಟಕಕ್ಕೆ ಹೆಮ್ಮೆ ತಂದುಕೊಟ್ಟಿರುವ ಅತ್ಯಂತ ಪ್ರಮುಖರಲ್ಲಿ ಒಬ್ಬರಾಗಿರುವ ಇನ್ಫೋಸಿಸ್‌ ನಾರಾಯಣ ಮೂರ್ತಿ ಹಾಗೂ ಪತ್ನಿ ಸುಧಾ ಮೂರ್ತಿ ಅವರ ಜೀವನವನ್ನಾಧರಿಸಿದ ಚಿತ್ರ ನಿರ್ಮಾಣ ಮಾಡಲು ಬಾಲಿವುಡ್‌ ನಿರ್ಮಾಪಕರು ಮುಂದಾಗಿದ್ದಾರೆ. ಈ ಚಿತ್ರವನ್ನು ಮಹಾವೀರ್ ಜೈನ್, ಅಶ್ವಿನಿ ತಿವಾರಿ ಮತ್ತು ಸಂಜಯ್ ತ್ರಿಪತಿ ಜಂಟಿಯಾಗಿ ನಿರ್ಮಿಸಲಿದ್ದಾರೆ ಎಂದು ಮುಂಬೈ ಮಿರರ್ ವರದಿ ತಿಳಿಸಿದೆ. ಚಲನಚಿತ್ರ ನಿರ್ಮಾಪಕ ಸಂಜಯ್ ನಾರಾಯಣ ಮೂರ್ತಿ ಅವರ ಬಗ್ಗೆ ಚಲನಚಿತ್ರ ಮಾಡಲು ಮೊದಲು ಆಸಕ್ತಿ ವ್ಯಕ್ತಪಡಿಸಿದರು. ತಿವಾರಿ ಅವರು ಮೂರ್ತಿಯನ್ನು ತಮ್ಮ ಮನೆಯಲ್ಲಿ ಒಂದೆರಡು ಬಾರಿ ಭೇಟಿಯಾದರು ಮತ್ತು ಹೆಚ್ಚಿನ ಚರ್ಚೆಯ ನಂತರ ಮೂರ್ತಿ ಈ ಯೋಜನೆಗೆ ಅನುಮತಿ ನೀಡಿದರು, ಎಂದು ತಿಳಿದುಬಂದಿದೆ. ತಿವಾರಿ ಈಗಾಗಲೇ 30 ಪುಟಗಳ ಸ್ಕ್ರಿಪ್ಟ್ ಅನ್ನು ಮೂರ್ತಿಗೆ ಹಿಂದಿಯಲ್ಲಿ ಸಲ್ಲಿಸಿದ್ದಾರೆ ಮತ್ತು ಅವರಿಗೆ ಇಂಗ್ಲಿಷ್ ಅನುವಾದವನ್ನು ಕಳುಹಿಸಿದ್ದಾರೆ, ಆದರೆ ಸ್ಕ್ರಿಪ್ಟ್ ಇನ್ನೂ ಲಾಕ್ ಆಗಿಲ್ಲ.

ದೇಶಕ್ಕೆ ದಂಪತಿಗಳು ನೀಡಿದ ಕೊಡುಗೆಯನ್ನು ಚಿತ್ರದಲ್ಲಿ ನೋಡಬಹುದಾಗಿದೆಯಂತೆ. ಈ ಚಿತ್ರ ಮುಂದಿನ ವರ್ಷ ರೋಲ್ ಆಗುವ ನಿರೀಕ್ಷೆಯಿದೆ. ಐಟಿ ದಂಪತಿಗಳಾದ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರಂತಹ ಸ್ಪೂರ್ತಿದಾಯಕ ಜೀವನ ಕಥೆಯನ್ನು ಬೆಳ್ಳಿ ಪರದೆಯಲ್ಲಿ ನೋಡಲು ಆಸಕ್ತಿದಾಯಕವಾಗಿದೆ.