ಪವನ್ ಒಡೆಯರ್ ನಿರ್ದೇಶನದ ಮುಂದಿನ ಸಿನೆಮಾ ರೆಮೋ ಚಿತ್ರಕ್ಕೆ ಸುಮಾರು ಒಂದು ಕೋಟಿ ವೆಚ್ಚದಲ್ಲಿ ಸೆಟ್ ಹಾಕಲಾಗಿದೆಯಂತೆ. ವಿಜಯನಗರದ ಬಸ್ ನಿಲ್ದಾಣದ ಟೆರಸ್ ಮೇಲೆ ಐಷಾರಾಮಿ ಕಚೇರಿಯ ಸೆಟ್ ಹಾಕಲಾಗಿದೆ. ಚಿತ್ರದಲ್ಲಿ ಬರುವ ಬಹುಮುಖ್ಯ ದೃಶ್ಯಕ್ಕಾಗಿ 1 ಕೋಟಿ ರೂಪಾಯಿ ವೆಚ್ಚದಲ್ಲಿ ಸೆಟ್ ಹಾಕಿ ಶೂಟ್ ಮಾಡಲಾಗುತ್ತಿದೆ. ಸಂಪೂರ್ಣವಾಗಿ ಗಾಜಿನಲ್ಲಿ ಸೆಟ್ ರೂಪಿಸಲಾಗಿದೆ. ನಿರ್ದೇಶಕರ ಕಲ್ಪನೆಗೆ ತಕ್ಕಂತೆ ಕಲಾ ನಿರ್ದೇಶಕರಾದ ಗುಣ ಮತ್ತು ಕರಣ್ ಈ ಸೆಟ್ ರಚಿಸಿದ್ದಾರೆ.

ಪವನ್ ಒಡೆಯರ್ ಸಿನಿಮಾದಲ್ಲಿ ಇಶಾನ್ ಗೆ ಜೋಡಿ ಯಾಗಿ ಆಶಿಕಾ ರಂಗನಾಥ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನ ಸಿ ಆರ್ ಮನೋಹರ್ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನವಿದೆ.