‘ಡಿ ಬಾಸ್‌’ ಅಭಿಮಾನಿಗಳ ವಲಯದಲ್ಲಿ ‘ರಾಬರ್ಟ್‌’ ಸಿನಿಮಾ ದೊಡ್ಡ ನಿರೀಕ್ಷೆ ಸೃಷ್ಟಿಯಾಗಿದೆ. ಅದರ ಜೊತೆಗೆ ‘ರಾಜವೀರ ಮದಕರಿ ನಾಯಕ’ ಕೂಡ ಹೈಪ್‌ ಸೃಷ್ಟಿಸಿದೆ. ಈ ಹಿಂದೆ ದರ್ಶನ್‌ ಅಭಿನಯದ ‘ವಿರಾಟ್‌’, ‘ಅಂಬರೀಷ’, ‘ಭೂಪತಿ’ ಸಿನಿಮಾಗಳಲ್ಲಿ ಸುಮಲತಾ ಅಂಬರೀಷ್‌ ನಟಿಸಿದ್ದರು. ಈಗ ಮತ್ತೊಮ್ಮೆ ‘ಚಾಲೆಂಜಿಂಗ್‌ ಸ್ಟಾರ್’ ಜೊತೆ ಕ್ಯಾಮರಾ ಎದುರಿಸಲಿದ್ದಾರೆ. ‘ರಾಜವೀರ ಮದಕರಿ ನಾಯಕ’ ಸಿನಿಮಾದಲ್ಲಿ ದರ್ಶನ್‌ ಮದಕರಿ ನಾಯಕನಾಗಿ ನಟಿಸುತ್ತಿದ್ದರೆ ಸುಮಲತಾಗೆ ರಾಜಮಾತೆಯ ಪಾತ್ರ ನೀಡಲಾಗಿದೆ. ಹಾಗಾಗಿ ಇಬ್ಬರ ಕಾಂಬಿನೇಷನ್‌ ಬಗ್ಗೆ ಅಭಿಮಾನಿಗಳಿಗೆ ಭಾರಿ ಕುತೂಹಲ ಮೂಡಿದೆ. ‘ರಾಜಮಾತೆಯ ಪಾತ್ರಕ್ಕೆ ಸುಮಲತಾ ಸೂಕ್ತ ಆಯ್ಕೆ.

ಪಿ. ರವಿಶಂಕರ್‌ ಮತ್ತು ದೊಡ್ಡಣ್ಣ ಕೂಡ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಲಿದ್ದಾರೆ. ಇನ್ನುಳಿದ ಪಾತ್ರವರ್ಗದ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡುತ್ತೇವೆ’ ಎಂದಿದ್ದಾರೆ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು.