ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸದ್ಯ ಯುವರತ್ನ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಪವರ್ ಸ್ಟಾರ್ ಯುವರತ್ನ ಚಿತ್ರದ ಚಿತ್ರೀಕರಣದ ನಡುವೆಯೂ ಮುಂದಿನ ಸಿನಿಮಾದ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ. ಪವರ್ ಸ್ಟಾರ್, ಮುಂದಿನ ಬಹುನಿರೀಕ್ಷೆಯ ಜೇಮ್ಸ್ ಚಿತ್ರದಲ್ಲಿ ತೊಡಗಿಕೊಳ್ಳಲಿದ್ದಾರೆ. ಈಗಾಗಲೆ ಟೈಟಲ್ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿರುವ ಜೇಮ್ಸ್ ಚಿತ್ರದ ಮುಹೂರ್ತ ಇದೆ ತಿಂಗಳು 19ಕ್ಕೆ ನೆರವೇರಲಿದೆ ಎಂದು ಹೇಳಲಾಗುತ್ತಿದೆ. ಜೇಮ್ಸ್ ಟೈಟಲ್ ಹೇಳುವ ಹಾಗೆ ಇದೊಂದು ಪಕ್ಕಾ ಆಕ್ಷನ್ ಕಮರ್ಷಿಯಲ್ ಎಂಟರ್ಟೈನರ್ ಸಿನಿಮಾ. ಹಾಗಾಗಿ ಜೇಮ್ಸ್ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.

ಚಿತ್ರಕ್ಕೆ ಭರ್ಜರಿ ಚೇತನ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಜೇಮ್ಸ್ ಚಿತ್ರಕ್ಕೆ ನಿರ್ಮಾಪಕ ಕಿಶೋರ್ ಪತಿಕೊಂಡ ಬಂಡವಾಳ ಹೂಡುತ್ತಿದ್ದಾರೆ. ಸದ್ಯ ಪ್ರಿಪ್ರೊಡಕ್ಷನ್ ಕೆಲಸದಲ್ಲಿರುವ ಜೇಮ್ಸ್ ತಂಡ ಜನವರಿ 19ರಿಂದ ಚಿತ್ರೀಕರಣ ಪ್ರಾರಂಭಿಸಲಿದೆ.