ಲವ್​ ಮಾಕ್ಟೇಲ್​ ಸಿನಿಮಾ ಥಿಯೇಟರ್​ನಲ್ಲಿ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಾಣದಿದ್ದರು ಓಟಿಟಿ ಫ್ಲಾಟ್​ಫಾರ್ಮ್​ನಲ್ಲಿ ದೊಡ್ಡ ಸಂಚಲನವನ್ನು ಸೃಷ್ಠಿಸಿತ್ತು. ಓಟಿಟಿಯಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡು ಸಾಕಷ್ಟು ಜನರಿಗೆ ಇಷ್ಟವಾಗಿತ್ತು. ಇದೀಗ ಇದೇ ಲವ್​​ ಮಾಕ್ಟೇಲ್​ ಸಿನಿಮಾದಿಂದ ಖುಷಿ ವಿಚಾರವೊಂದು ಹೊರಬಿದ್ದಿದೆ. ಚಿತ್ರದಲ್ಲಿನ ‘ಲವ್​ ಯೂ ಚಿನ್ನ‘ ಹಾಡು ಯ್ಯೂಟೂಬ್​ನಲ್ಲಿ ಬರೋಬ್ಬರಿ ಒಂದು ಕೋಟಿ ವೀಕ್ಷಣೆ ಕಂಡಿದೆ. ಚಿತ್ರದ ನಾಯಕಿ ಮಿಲನಾ ನಾಗರಾಜ್​​ ಈ ಖುಷಿಯ ವಿಚಾರವನ್ನು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮೆಲೊಡಿ ಹಾಡನ್ನು ನೀಡಿದ ಸಂಗೀತ ನಿರ್ದೇಶಕ ರಘ ದೀಕ್ಷಿತ್​​ ಮತ್ತು ಹಿರೋ ಡಾರ್ಲಿಂಗ್​​ ಕೃಷ್ಣ ಮತ್ತು ಕ್ಯಾಮೆರಾಮೆನ್​​​ ಶ್ರೀಕ್ರೇಜಿಮೈಂಡ್ಸ್​​ಗೆ ಧನ್ಯವಾದ ತಿಳಿಸಿದ್ದಾರೆ.                                                                                                                                                    ಸದ್ಯ ಡಾರ್ಲಿಂಗ್​ ಕೃಷ್ಣ ಮತ್ತು ಮಿಲನಾ ನಾಗರಾಜ್​​​ ಲವ್​ ಮಾಕ್ಟೇಲ್​​-2 ಸಿನಿಮಾದ ಸ್ಕ್ರಿಪ್ಟ್​​ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಮಿಲನಾ ನಾಗರಾಜ್​​ ಅವರು ಹುಟ್ಟು ಹಬ್ಬದಂದು ‘ಲವ್​ ಮಾಕ್ಟೇಲ್​​ 2‘ ಸಿನಿಮಾ ಸ್ಕ್ರೀಪ್ಟ್​ ಮಾಡುತ್ತಿದ್ದೇವೆ. ಸ್ಕ್ರಿಪ್ಟ್​​​​ ತುಂಬ ಚೆನ್ನಾಗಿ ಡೆವಲವ್​ ಆಗುತ್ತಿದೆ. ನೀವೆಲ್ಲರು ‘ಲವ್​ ಮಾಕ್ಟೇಲ್​​​​​ 2‘ ಗಾಗಿ ಕಾಯುತ್ತಾ ಇದ್ದೀರಾ ಎಂದು ಅಂದುಕೊಂಡಿದ್ದೇನೆ. ಉತ್ತಮವಾದುದನ್ನು ನಿಮಗೆ ನಿಡೋಕೆ ನಾವು ಕೂಡ ಟ್ರೈ ಮಾಡುತ್ತಿದ್ದೇವೆ‘ ಎಂದು ಹೇಳಿದ್ದರು. ಲಾಕ್​ಡೌನ್​ ಮುಗಿದ ನಂತರ ಚಿತ್ರೀಕರಣಕ್ಕೆ ಚಾಲನೆ ನೀಡಲಿದ್ದಾರೆ.