ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾಸ್ತವ್ ಜೋಡಿ ಅಭಿನಯದ ‘ಅವನೇ ಶ್ರೀ ಮನ್ನಾರಾಯಣ’ ಚಿತ್ರ ಡಿ. 27ರಂದು ರಿಲೀಸ್‌ ಆಗುತ್ತಿದ್ದು, ಈಗಾಗಲೇ ಟ್ರೇಲರ್ ಹಾಗೂ ಸಾಂಗ್ಗಳ ಮೂಲಕ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ.

ಒಂದು ವಾರಕ್ಕೂ ಮೊದಲೇ, ಟಿಕೆಟ್ ಬುಕ್ಕಿಂಗ್ ಶುರುವಾಗಿದ್ದು, ಬೆಂಗಳೂರಿನ 2 ಚಿತ್ರಮಂದಿರಗಳಲ್ಲಿ ಅಡ್ವಾನ್ಸ್‌ ಬುಕಿಂಗ್‌ಗೆ ಅವಕಾಶ ನೀಡಲಾಗಿತ್ತು. ಅಭಿಮಾನಿಗಳು ಟಿಕೆಟ್ ಕೊಂಡುಕೊಳ್ಳಲು ಮುಗಿಬಿದ್ದಿದ್ದಾರೆ. ರಿಲೀಸ್ ಮೊದಲ ದಿನವೇ ಮೊದಲ ಶೋವನ್ನು ನೋಡಲು ಟಿಕೆಟ್‌ಗಳನ್ನು ಅಡ್ವಾನ್ಸ್‌ ಬುಕ್ಕಿಂಗ್ ಮಾಡಿಕೊಂಡಿದ್ದಾರೆ. ‘ಅವನೇ ಶ್ರೀ ಮನ್ನಾರಾಯಣ’ ಸಿನಿಮಾದ ಹಾಡನ್ನು ಮತ್ತು ಟ್ರೈಲರ್ ನೋಡಿ ಖುಷಿಪಟ್ಟಿರುವ ಅಭಿಮಾನಿಗಳಿಗೆ ಚಿತ್ರದ ಮೇಲೆ ನಿರೀಕ್ಷೆ ಇರುವುದು ಸುಳ್ಳಲ್ಲ.

ಈ ಸಿನಿಮಾವನ್ನು ಸಚಿನ್ ನಿರ್ದೇಶನ ಮಾಡಿದ್ದು, ರಕ್ಷಿತ್ ಶೆಟ್ಟಿ ಜೊತೆ ಪ್ರಮೋದ್, ಅಚ್ಯುತ್ ಕುಮಾರ್ ಮೊದಲಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ಹಾಗೂ ಹೆಚ್ ಕೆ ಪ್ರಕಾಶ್ ಗೌಡ ಬಂಡವಾಳ ಹಾಕಿದ್ದಾರೆ. ಸದ್ಯ ಚಿತ್ರತಂಡ ಸೌತ್ ಇಂಡಿಯಾದಲ್ಲಿ ಭರ್ಜರಿ ಪ್ರಮೋಷನ್ ಮಾಡ್ತಿದೆ.