‘ಉಗ್ರಂ’ ಚಿತ್ರ ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ನ ಸೂಪರ್ ಡೂಪರ್ ಸಿನಿಮಾ. ಈ ಚಿತ್ರ ಶ್ರೀಮುರಳಿಗೆ ದೊಡ್ಡ ಹಿಟ್ ನೀಡಿತ್ತು. ಈ ಚಿತ್ರದಲ್ಲಿದ್ದ ಅಗಸ್ತ್ಯನ ಉಗ್ರ ಪ್ರತಾಪವನ್ನು ಜನರು ಇನ್ನೂ ಮರೆತಿಲ್ಲ. 2014ರಲ್ಲಿ ತೆರೆಕಂಡಿದ್ದ ಈ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದರು. ಈ ಚಿತ್ರ ಶ್ರೀಮುರಳಿಗೆ ಮಾಸ್ ಹೀರೋ ಅನ್ನೋ ಹೊಸ ಇಮೇಜ್ ಕೂಡ ತಂದು ಕೊಟ್ಟಿತ್ತು.

ಆದರೆ ಉಗ್ರಂ 2 ಸಿನಿಮಾ ಬರಬೇಕು ಎನ್ನೋದು ಹಲವರ ಅಭಿಪ್ರಾಯವಾಗಿತ್ತು. ಇದೀಗ ಉಗ್ರಂ-2 ಸಿನಿಮಾ ಮಾಡ್ತಾರೆ ಅನ್ನೋದು ತುಂಬಾನೇ ಸುದ್ದಿಯಾಗ್ತಿದೆ. ಈ ಬಗ್ಗೆ ಶ್ರೀ ಮುರಳಿ ಅಭಿಮಾನಿಗಳು ಉಗ್ರಂ ಸೀಕ್ವೆಲ್ ಬಗ್ಗೆ ಯಾವಾಗ ಅಂತಾ ಸೋಶಿಯಲ್ ಮೀಡಿಯಾದಲ್ಲಿ ಕೇಳ್ತಿದ್ದಾರೆ. ಮೂಲಗಳ ಪ್ರಕಾರ ಉಗ್ರಂ 2 ಸಿನಿಮಾ ಬರೋದು ಪಕ್ಕಾ ಆಗಿದ್ದು ಸದ್ಯ ಚಿತ್ರದ ಸ್ಕ್ರಿಪ್ಟ್ ಕೆಲಸಗಳು ಸದ್ದಿಲ್ಲದೆ ನಡೆಯುತ್ತಿವೆ. ಒಂದು ಕಡೆ ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್ ನಲ್ಲಿ ಬ್ಯುಸಿಯಾಗಿದ್ದರೆ. ಸದ್ಯಕ್ಕೆ ನಾನು ‘ಮದಗಜ’ ಸಿನಿಮಾ ಒಪ್ಪಿಕೊಂಡಿದ್ದೇನೆ. ಅದು ಮುಗಿಯುವ ಹೊತ್ತಿಗೆ ‘ಕೆಜಿಎಫ್ – 2’ ಸಹ ಮುಗಿದಿರುತ್ತದೆ. ಖಂಡಿತಾ ಮುಂದಿನ ವರ್ಷ ‘ಉಗ್ರಂ – 2’ ಶುರುವಾಗಲಿದೆ ಎಂದಿದ್ದಾರೆ. ಒಟ್ಟಾರೆಯಾಗಿ ‘ಉಗ್ರಂ 2’ ಸಿನಿಮಾ ನೋಡಲು ಜನರು ಕಾತುರದಲ್ಲಿರೋದಂತೂ ಸತ್ಯ.